33 ಪ್ರಶ್ನೆಗಳ ಪಟ್ಟಿ - ಜನಗಣತಿ 2027(Phase-1)

0

ಗೃಹ ಸಚಿವಾಲಯವು ಮನೆ ಪಟ್ಟಿ ಮತ್ತು ವಸತಿ ಗಣತಿಗಾಗಿ ಈ ಕೆಳಗಿನ 33 ಪ್ರಶ್ನೆಗಳನ್ನು ಸೂಚಿಸಿದೆ. ಈ ಪ್ರಶ್ನೆಗಳು ಭಾರತದಾದ್ಯಂತ ಪ್ರತಿ ಕುಟುಂಬದ ಜೀವನ ಮಟ್ಟವನ್ನು ಅರ್ಥಮಾಡಿಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡುತ್ತವೆ.

ವಿಭಾಗ A: ಕಟ್ಟಡ ಮತ್ತು ಮನೆಯ ವಿವರಗಳು  
Q1: ಕಟ್ಟಡದ ಸಂಖ್ಯೆ (ನಗರಸಭೆ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಜನಗಣತಿ ಸಂಖ್ಯೆ).*
Q2: ಜನಗಣತಿ ಮನೆ ಸಂಖ್ಯೆ.*
Q3: ಜನಗಣತಿ ಮನೆಯ ನೆಲಕ್ಕೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ.
Q4: ಜನಗಣತಿ ಮನೆಯ ಗೋಡೆಗೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ.
Q5: ಜನಗಣತಿ ಮನೆಯ ಮೇಲ್ಛಾವಣಿಗೆ ಪ್ರಧಾನವಾಗಿ ಬಳಸಲಾಗಿರುವ ನಿರ್ಮಾಣ ಸಾಮಗ್ರಿ.
Q6: ಜನಗಣತಿ ಮನೆಯ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು.*
Q7: ಜನಗಣತಿ ಮನೆಯ ಸ್ಥಿತಿ.
ವಿಭಾಗ B: ಕುಟುಂಬಕ್ಕೆ ಸಂಬಂಧಿಸಿದ ಮಾಹಿತಿ
Q8: ಕುಟುಂಬದ ಸಂಖ್ಯೆ.*
Q9: ಕುಟುಂಬದಲ್ಲಿ ಸಾಮಾನ್ಯವಾಗಿ ವಾಸಿಸುವ ವ್ಯಕ್ತಿಗಳ ಒಟ್ಟು ಸಂಖ್ಯೆ.
Q10: ಕುಟುಂಬದ ಮುಖ್ಯಸ್ಥರ ಹೆಸರು.
Q11: ಕುಟುಂಬದ ಮುಖ್ಯಸ್ಥರ ಲಿಂಗ(Gender).
Q12: ಕುಟುಂಬದ ಮುಖ್ಯಸ್ಥರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಇತರೆ ವರ್ಗಕ್ಕೆ ಸೇರಿದವರೇ?
Q13: ಜನಗಣತಿ ಮನೆಯ ಮಾಲೀಕತ್ವದ ಸ್ಥಾನಮಾನ (ಸ್ವಂತ ಅಥವಾ ಬಾಡಿಗೆ).
Q14: ವಾಸದ ಕೊಠಡಿಗಳ ಸಂಖ್ಯೆ.
Q15: ಕುಟುಂಬದಲ್ಲಿ ವಾಸಿಸುತ್ತಿರುವ ವಿವಾಹಿತ ದಂಪತಿ(ಗಳ) ಸಂಖ್ಯೆ.
ವಿಭಾಗ C: ಕುಟುಂಬಕ್ಕೆ ಲಭ್ಯವಿರುವ ಸೌಲಭ್ಯಗಳು ಮತ್ತು ಮೂಲಭೂತ ಸೇವೆಗಳು
Q16: ಕುಡಿಯುವ ನೀರಿನ ಪ್ರಧಾನ ಮೂಲ.
Q17: ಕುಡಿಯುವ ನೀರಿನ ಮೂಲದ ಲಭ್ಯತೆ.
Q18: ಬೆಳಕಿನ ಪ್ರಧಾನ ಮೂಲ.
Q19: ಶೌಚಾಲಯದ ಲಭ್ಯತೆ.
Q20: ಶೌಚಾಲಯದ ಬಗೆ/ವಿಧಗಳು.
Q21: ತ್ಯಾಜ್ಯ ನೀರನ್ನು ಹೊರಸಾಗಿಸಲು ಮಾಡಿರುವ ವ್ಯವಸ್ಥೆ.
Q22: ಆವರಣದ ಒಳಗೆ ಸ್ನಾನಗೃಹದ ಲಭ್ಯತೆ.
Q23: ಅಡುಗೆಮನೆಯ ಲಭ್ಯತೆ ಮತ್ತು ಎಲ್‌ಪಿಜಿ/ಪಿಎನ್‌ಜಿ (LPG/PNG) ಸಂಪರ್ಕ.
Q24: ಅಡುಗೆ ಮಾಡಲು ಬಳಸುವ ಪ್ರಮುಖ ಇಂಧನ.
ವಿಭಾಗ D: ಕುಟುಂಬವು ಹೊಂದಿರುವ ಸ್ವತ್ತುಗಳು, ಆಹಾರ ಮತ್ತು ಸಂವಹನ
Q25: ರೇಡಿಯೋ/ಟ್ರಾನ್ಸಿಸ್ಟರ್.
Q26: ಟೆಲಿವಿಷನ್ (ಟಿವಿ).
Q27: ಇಂಟರ್ನೆಟ್ ಸಂಪರ್ಕ.
Q28: ಲ್ಯಾಪ್‌ಟಾಪ್/ಕಂಪ್ಯೂಟರ್.
Q29: ಟೆಲಿಫೋನ್/ಮೊಬೈಲ್ ಫೋನ್/ಸ್ಮಾರ್ಟ್‌ಫೋನ್.
Q30: ಬೈಸಿಕಲ್/ಸ್ಕೂಟರ್/ಮೋಟಾರ್ ಸೈಕಲ್/ಮೊಪೆಡ್.
Q31: ಕಾರು/ಜೀಪ್/ವ್ಯಾನ್.
Q32: ಕುಟುಂಬದಲ್ಲಿ ಬಳಸುವ ಮುಖ್ಯ ಧಾನ್ಯ.
Q33: ಮೊಬೈಲ್ ಸಂಖ್ಯೆ (ಜನಗಣತಿ ಸಂಬಂಧಿತ ಸಂವಹನಕ್ಕಾಗಿ ಮಾತ್ರ).

ಟಿಪ್ಪಣಿ: "*" ಗುರುತು ಇರುವ ಪ್ರಶ್ನೆಗಳು ಸ್ವಯಂ-ಗಣತಿಯಲ್ಲಿ ಲಭ್ಯವಿರುವುದಿಲ್ಲ ಆದರೆ  ಜನಗಣತಿ ಎನ್ಯೂಮರೇಟರ್ (ಗಣತಿದಾರರು) ನಿಮ್ಮ ಮನೆಗೆ ಭೇಟಿ ನೀಡಿದಾಗ "*" ಗುರುತು ಇರುವ ಪ್ರಶ್ನೆಗಳಿಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.



Post a Comment

0 Comments
Post a Comment
To Top